PhD thesis of Sri K. S. Patil:
Shodhganga@INFLIBNET: Hooli mattu lakkundi devalayagalu ondu toulanika adhyayana
Collection of Information, Photos and news articles of Hooli. ಹೂಲಿಯ ಮಾಹಿತಿ, ಫೋಟೊ ಹಾಗೂ ಪತ್ರಿಕಾ ಲೇಖನಗಳ ಸಂಗ್ರಹ
೧೮೭೬ರಲ್ಲಿ ಹೆಸರಾಂತ ಇತಿಹಾಸ ತಜ್ಞ ಶ್ರೀ ಫ್ಲೀಟರು ತಮಗೆ ಸಿಕ್ಕ ಬೆಳಗಾವಿ-ಮುನವಳ್ಳಿಗಳ ಜೋಯಿಸರ ಮನೆತನದ ಇತಿಹಾಸವನ್ನು ʼA Cronicle of Toragaĺ ಎಂದು ಇಂಡಿಯನ್ ಎಂಟಿಕ್ವೆರಿ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಆ ಬರಹ ಇಲ್ಲಿದೆ.
ಬರಹದಲ್ಲಿ ಫ್ಲೀಟರು ʼಪೂವಲ್ಲಿʼಯನ್ನು ʼಹುಬ್ಬಳ್ಳಿʼ ಎಂದು ತಪ್ಪಾಗಿ ತಿಳಿದಿದ್ದಾರೆ. (ವಿದ್ವಾಂಸರೂ ಕೂಡ ಮನುಜರೇ, ಅವರೂ ತಪ್ಪು ಮಾಡುತ್ತಾರೆ..).
ಮೂಲ ಬರಹದಲ್ಲಿ (ಅಥವಾ ಅದರ ಅನುವಾದದಲ್ಲಿ - ಕಡಿಮೆ ಸಾಧ್ಯತೆ) ಹಲವು ಹೊಂದಿಕೆಯಾಗದ ವಿಷಯಗಳಿವೆ:
೧. ವಿಜಯನಗರ ಸಾಮ್ರಾಜ್ಯದ ಬುಕ್ಕರಾಯನ ತಂದೆ ಜಯಶೇಖರ ಶಕ ವರ್ಷ ೧೦೦೮ರಲ್ಲಿ ತೊರಗಲ್ಲಿನ ಗ್ರಾಮಪುರೋಹಿತ್ಯವನ್ನು ವಹಿಸಿದಂತೆ ಬರೆದಿದೆ - ಆದರೆ ಬುಕ್ಕರಾಯನ ಕಾಳ ೧೩ನೇ ಶತಮಾನ ಮತ್ತು ಅವರ ತಂದೆಯ ಹೆಸರು ಜಯಶೇಖರ ಅಲ್ಲ.
೨. ರಾಜ ಜಯಶೇಖರನ ತಂದೆ-ತಾಯಿಗಳು ಹೂಲಿಯ ನಾಗರತೀರ್ಥದ ಅಗಸ್ತೇಶ್ವರ ಪರಿಸರದಲ್ಲಿ ಕೈಲಾಸವಾಸಿಗಳಾದರೆಂದು ಬರಹ ತಿಳಿಸುತ್ತದೆ. ಆದರೆ ಹೂಲಿಯಲ್ಲಿ ರಾಜ ದಂಪತಿಗಳು ಇದ್ದ ಬಗ್ಗೆ ಬೇರಾವುದೇ ಉಲ್ಲೇಖಗಳು ಸಿಗುವುದಿಲ್ಲ.