೧೮೭೬ರಲ್ಲಿ ಹೆಸರಾಂತ ಇತಿಹಾಸ ತಜ್ಞ ಶ್ರೀ ಫ್ಲೀಟರು ತಮಗೆ ಸಿಕ್ಕ ಬೆಳಗಾವಿ-ಮುನವಳ್ಳಿಗಳ ಜೋಯಿಸರ ಮನೆತನದ ಇತಿಹಾಸವನ್ನು ʼA Cronicle of Toragaĺ ಎಂದು ಇಂಡಿಯನ್ ಎಂಟಿಕ್ವೆರಿ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಆ ಬರಹ ಇಲ್ಲಿದೆ.
ಬರಹದಲ್ಲಿ ಫ್ಲೀಟರು ʼಪೂವಲ್ಲಿʼಯನ್ನು ʼಹುಬ್ಬಳ್ಳಿʼ ಎಂದು ತಪ್ಪಾಗಿ ತಿಳಿದಿದ್ದಾರೆ. (ವಿದ್ವಾಂಸರೂ ಕೂಡ ಮನುಜರೇ, ಅವರೂ ತಪ್ಪು ಮಾಡುತ್ತಾರೆ..).
ಮೂಲ ಬರಹದಲ್ಲಿ (ಅಥವಾ ಅದರ ಅನುವಾದದಲ್ಲಿ - ಕಡಿಮೆ ಸಾಧ್ಯತೆ) ಹಲವು ಹೊಂದಿಕೆಯಾಗದ ವಿಷಯಗಳಿವೆ:
೧. ವಿಜಯನಗರ ಸಾಮ್ರಾಜ್ಯದ ಬುಕ್ಕರಾಯನ ತಂದೆ ಜಯಶೇಖರ ಶಕ ವರ್ಷ ೧೦೦೮ರಲ್ಲಿ ತೊರಗಲ್ಲಿನ ಗ್ರಾಮಪುರೋಹಿತ್ಯವನ್ನು ವಹಿಸಿದಂತೆ ಬರೆದಿದೆ - ಆದರೆ ಬುಕ್ಕರಾಯನ ಕಾಳ ೧೩ನೇ ಶತಮಾನ ಮತ್ತು ಅವರ ತಂದೆಯ ಹೆಸರು ಜಯಶೇಖರ ಅಲ್ಲ.
೨. ರಾಜ ಜಯಶೇಖರನ ತಂದೆ-ತಾಯಿಗಳು ಹೂಲಿಯ ನಾಗರತೀರ್ಥದ ಅಗಸ್ತೇಶ್ವರ ಪರಿಸರದಲ್ಲಿ ಕೈಲಾಸವಾಸಿಗಳಾದರೆಂದು ಬರಹ ತಿಳಿಸುತ್ತದೆ. ಆದರೆ ಹೂಲಿಯಲ್ಲಿ ರಾಜ ದಂಪತಿಗಳು ಇದ್ದ ಬಗ್ಗೆ ಬೇರಾವುದೇ ಉಲ್ಲೇಖಗಳು ಸಿಗುವುದಿಲ್ಲ.
No comments:
Post a Comment