Sunday, 5 February 2017

ಹೂಲಿ - News Article 4

ಕರ್ನಾಟಕ ಪ್ರಾಚೀನ ವಾಸ್ತುಶಿಲ್ಪವನ್ನು ನೋಡಬೇಕೆ? 
ಹಾಗಾದರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮಕ್ಕೆ ಬನ್ನಿ...! ಹೂಲಿ ಶಿಲ್ಪಕಲೆ, ವಾಸ್ತುಶಿಲ್ಪ, ಶಾಸನಗಳನ್ನು ಹೊಂದಿರುವ ಗ್ರಾಮವಾಗಿದೆ. ಸರ್ವಧರ್ಮ ಸಮನ್ವಯತೆ ಸಾಧಿಸಿದ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದ ಆ ಕಾಲದ ವಾಸ್ತುಶಿಲ್ಪಗಳು ಇಲ್ಲಿವೆ
ಕರ್ನಾಟಕ ಪ್ರಾಚೀನ ವಾಸ್ತುಶಿಲ್ಪವನ್ನು ನೋಡಬೇಕೆ? ಹಾಗಾದರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮಕ್ಕೆ ಬನ್ನಿ...!
ಹೂಲಿ ಶಿಲ್ಪಕಲೆ, ವಾಸ್ತುಶಿಲ್ಪ, ಶಾಸನಗಳನ್ನು ಹೊಂದಿರುವ ಗ್ರಾಮವಾಗಿದೆ. ಸರ್ವಧರ್ಮ ಸಮನ್ವಯತೆ ಸಾಧಿಸಿದ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದ ಆ ಕಾಲದ ವಾಸ್ತುಶಿಲ್ಪಗಳು ಇಲ್ಲಿವೆ.

ಈ ಗ್ರಾಮದಲ್ಲಿ ಮಧನೇಶ್ವರ, ಅಂಧಕೇಶ್ವರ, ತಾರಕೇಶ್ವರ, ಬನಶಂಕರಿ, ರಾಮೇಶ್ವರ, ನಾರಾಯಣ, ವೀರಭದ್ರ, ಕಲ್ಮೇಶ್ವರ, ಕರಿಸಿದ್ಧೇಶ್ವರ, ಪಂಚಲಿಂಗೇಶ್ವರ ಸೇರಿದಂತೆ ವಾಸ್ತುಶಿಲ್ಪಗಳಿಂದ ಕೂಡಿದ ಹಲವಾರು ಪ್ರಾಚೀನ ದೇವಾಲಯಗಳಿವೆ.

ಈ ದೇವಾಲಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವಾಸ್ತುಶಿಲ್ಪ ಕಲೆಯಲ್ಲಿ ಈ ಭಾಗದ ಶಿಲ್ಪಿಗಳು ಪರಿಣಿತರಷ್ಟೇ ಅಲ್ಲ, ಪ್ರಬುದ್ಧರೂ ಆಗಿದ್ದರು ಎನ್ನುವದು ನಿಜ ಎನಿಸುತ್ತದೆ. ಐತಿಹಾಸಿಕ ಮತ್ತು ಕಲೆಗಳ ದೃಷ್ಟಿಯಿಂದ ಮಹತ್ವ ಪಡೆದ ಇಲ್ಲಿನ ಅಮೂಲ್ಯ ಶಿಲ್ಪಕಲಾಕೃತಿಗಳು ಈ ಭಾಗದ ಜನರ ಇತಿಹಾಸದ ತಿಳಿವಳಿಕೆಯ ಕೊರತೆಯಿಂದಾಗಿ ಇಂದು ಅವಸಾನದ ಅಂಚಿಗೆ ತಲುಪುತ್ತಿವೆ.

ಹೂಲಿ ಗ್ರಾಮ ಪ್ರಾಚೀನ ಕಾಲದಲ್ಲಿ ಬೆಳವುಲ ದೇಶದ ಮಹಾರಾಜರು ಆಡಳಿತ ನಡೆಸುತ್ತಿದ್ದ ಕೇಂದ್ರವಾಗಿದ್ದು, ಹದಿನೆಂಟು ಅಗ್ರಹಾರಗಳ ಮುಕುಟ ರತ್ನದಂತಿತ್ತು ಎಂದು ವರ್ಣಿಸಲಾಗಿದೆ. ಗ್ರಾಮದ ಉತ್ತರ ದಿಕ್ಕಿನಲ್ಲಿ ಗುಡ್ಡದ ಪಕ್ಕದಲ್ಲಿ ಅನೇಕ ವಿರೂಪಗೊಂಡ ದೇವಾಲಯಗಳಿದ್ದು, ಋಷಿಮುನಿಗಳು ಇಲ್ಲಿ ಯಜ್ಞ- ಯಾಗಾದಿಗಳನ್ನು ನಡೆಸಿದ್ದಾರೆ ಎಂಬುದಕ್ಕೆ ಕುರುಹಾಗಿ ಹಾಳಾದ ಅನೇಕ ಯಜ್ಞಕುಂಡ ಸ್ತಂಭಗಳು ಕಾಣ ಸಿಗುತ್ತವೆ.

ಇಲ್ಲಿನ ದೇವಾಲಯಗಳು ಕಲ್ಯಾಣ ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರದ ಅರಸರ ಶಿಲ್ಪಕಲಾ ಪರಂಪರೆಗೆ ಬುನಾದಿಯಂತಿವೆ. ಒಂದು ಕಾಲದಲ್ಲಿ ಹೂಲಿ ಗ್ರಾಮವು ನೂರಕ್ಕೂ ಹೆಚ್ಚು ದೇವಾಲಯ ಹಾಗೂ ಬಾವಿಗಳನ್ನು ಹೊಂದಿತ್ತು ಎಂಬುದು ಪ್ರತೀತಿಯಲ್ಲಿದೆ. ಇಲ್ಲಿ ದೊರೆಯುವ ದೇವಾಲಯಗಳಲ್ಲಿನ ವಾಸ್ತುಶಿಲ್ಪ ಕಲೆಯನ್ನು ನೋಡಿದರೆ ಇದನ್ನು ಶಿಲ್ಪಕಲೆಯ ರಾಜಧಾನಿ ಎಂದು ಕರೆಯಬಹುದು.

ಪಂಚಲಿಂಗೇಶ್ವರ ದೇವಾಲಯ
ಜೈನ ಮೂಲದ ಬಸದಿಯಾಗಿರಬಹುದಾದ ಪಂಚಲಿಂಗೇಶ್ವರ ದೇವಾಲಯ ವಾಸ್ತುಶಿಲ್ಪ ದೃಷ್ಟಿಯಿಂದ ಅತಿ ಪ್ರಾಮುಖ್ಯತೆ ಪಡೆದಿದ್ದು, ದೇಗುಲಗಳ ಚಕ್ರವರ್ತಿಯೆಂದೆ ಹೆಸರುವಾಸಿಯಾಗಿದೆ. ಈ ದೇವಾಲಯದ ಶಿಲ್ಪಕಲಾ ಸೌಂದರ್ಯ ಎಂಥವರನ್ನು ವಿಸ್ಮಯರನ್ನಾಗಿಸುತ್ತದೆ. ಗರ್ಭಗುಡಿಯಲ್ಲಿ ಮೂರು ಬೃಹದಾಕಾರದ ಲಿಂಗಗಳು ಹಾಗೂ ಸಭಾಮಂಟಪದಲ್ಲಿರುವ ಎರಡು ಗರ್ಭಗುಡಿಗಳಲ್ಲಿ ಎರಡು ಲಿಂಗಗಳು ಇರುವುದರಿಂದ ಇದಕ್ಕೆ ಪಂಚಲಿಂಗೇಶ್ವರ ದೇವಾಲಯ ಎಂದು ಕರೆಯುವರು.

ಇದು ವಿಶಾಲವಾದ ಸಭಾಮಂಟಪ ಹೊಂದಿದ್ದು, ಒಟ್ಟು 35 ಕಂಬಗಳಿವೆ. ಈ ದೇವಾಲಯದಲ್ಲಿ ನಾಲ್ಕು ಶಾಸನಗಳನ್ನು ಕಾಣಬಹುದು. ಈ ಶಾಸನಗಳು ಕ್ರಿ.ಶ. 1181ರ ಕಾಲದ್ದು ಎಂದು ಹೇಳಲಾಗಿದೆ. ಈ ದೇವಾಲಯವನ್ನು ಕೇಂದ್ರೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ರಕ್ಷಿತ ಸ್ಮಾರಕವೆಂದು ಘೋಷಿಸಿದೆ. ದೇವಾಲಯದ ಪ್ರಾಂಗಣದಲ್ಲಿ ಗ್ರಾಮದಲ್ಲಿ ದೊರೆತ ವೀರಗಲ್ಲು, ಹಲವಾರು ಶಿಲ್ಪವುಳ್ಳ ಮೂರ್ತಿ ಶಾಸನಗಳು ಇಡಲಾಗಿದೆ.

ಕಲ್ಲಿನ ಕೋಟೆ: ಗ್ರಾಮದ ಉತ್ತರ ದಿಕ್ಕಿನಲ್ಲಿ ಗುಡ್ಡದ ಮೇಲೆ ಒಂದು ಚಿಕ್ಕದಾದ ಕಲ್ಲಿನ ಕೋಟೆ ಇದೆ. ಇದು ಕಲ್ಯಾಣ ಚಾಲುಕ್ಯರದೆಂದು ಹೇಳಲಾಗುತ್ತಿದೆ. ಈ ಕೋಟೆಯ ವಿಸ್ತೀರ್ಣ ಸುಮಾರು 5 ಎಕರೆಗಳಷ್ಟಿದ್ದು, ಗೋಡೆಯ ರಚನೆಯನ್ನು ಮೂರು ಹಂತಗಳಲ್ಲಿ ಮಾಡಲಾಗಿದೆ. ಕೋಟೆಯಲ್ಲಿ 10 ಬುರುಜುಗಳಿವೆ. ಕೋಟೆಯೊಳಗಿರುವ ಮದ್ದು, ಶಸ್ತ್ರಸಂಗ್ರಹದ ಹೊಂಡ ಈಗಲೂ ಸುಸ್ಥಿತಿಯಲ್ಲಿವೆ. ಕೋಟೆಯ ಪ್ರವೇಶದ್ವಾರದ ಎದುರು ಶಿಥಿಲಗೊಂಡ ಚಿಕ್ಕ ದೇವಾಲಯದ ಅವಶೇಷವಿದ್ದು, ಅದರ ಲಿಂಗದ ಪೀಠವನ್ನು ಮಾತ್ರ ನಾವಿಂದು ಕಾಣಬಹುದು. ಸೈನಿಕರ ಬಿಡಾರ, ಧಾನ್ಯ ಗೋದಾಮು ಸೇರಿದಂತೆ ಅನೇಕ ಕಟ್ಟಡಗಳ ಅವಶೇಷಗಳನ್ನು ಕಾಣಬಹುದಾಗಿದೆ. ಕೋಟೆಗೆ ಹೋಗಲು ಸರಿಯಾದ ಮಾರ್ಗವಿಲ್ಲ. ಈ ಕೆಂಪು ಕಲ್ಲಿನ ಕೋಟೆಯು ಮುಂದಿನ ಪೀಳಿಗೆಗೆ ದಂತಕಥೆಯಾಗಿ ಉಳಿಯಲಿದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.

ಹೂಲಿ ಗ್ರಾಮವನ್ನು ಪ್ರವೇಶಿಸಿದರೆ ಇದು ಶಿಲ್ಪಕಲಾವಶೇಷಗಳ ಸಮುಚ್ಛಯವೆನೋ ಎನಿಸುತ್ತದೆ. ಅವಶೇಷಗಳಾಗಿ ನಿಂತಿರುವ ಇಲ್ಲಿನ ದೇವಾಲಯ ಹಾಗೂ ಕೆರೆಗಳನ್ನು ನೋಡಿದರೆ ಹಿಂದೆ ಎಷ್ಟು ವೈಭವದಿಂದ ಈ ಗ್ರಾಮ ಮೆರೆದಿರಬಹುದು ಎಂದು ಊಹಿಸಬಹುದಾಗಿದೆ. ರಘುವಾಂಕ ಕಾವ್ಯದ ಲೇಖಕ ಚಿಕ್ಕನಂದೇಶ ಈ ಗ್ರಾಮದವರಾಗಿದ್ದಾರೆ. ಇವರು ಹೂಲಿ ಗ್ರಾಮವನ್ನು ಪುವಲ್ಲಿ ಎಂದು ಬಣ್ಣಿಸಿದ್ದಾರೆ. ಇಲ್ಲಿನ ಶಾಸನಗಳು ಬಿಜ್ಜಳನ ಮಗ ಅಹವ ಮಲ್ಲದೇವ, ತ್ರಿಭುವನ ಮಲ್ಲದೇವನ ಕುರಿತದ್ದಾಗಿವೆ.

ಇಷ್ಟೊಂದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಹೂಲಿ ಗ್ರಾಮದಲ್ಲಿರುವ ವಾಸ್ತುಶಿಲ್ಪ ಕಲೆಯುಳ್ಳ ದೇವಾಲಯಗಳು, ವೀರಗಲ್ಲು, ಕೋಟೆ, ಶಾಸನಗಳು ಎಲ್ಲರ ನಿರ್ಲಕ್ಷ್ಯದಿಂದಾಗಿ ಇಂದು ಭಗ್ನಾವಸ್ಥೆಗೆ ತಲುಪಿದ್ದು, ಕಾಯಕಲ್ಪದ ನಿರೀಕ್ಷೆಯಲ್ಲಿವೆ. ಇವುಗಳನ್ನು ಸಂರಕ್ಷಿಸಲು ಸಂಬಂಧಪಟ್ಟ ಇಲಾಖೆಯವರು ಮುಂದಾಗಬೇಕು ಎಂಬುದು ಹೂಲಿ ಗ್ರಾಮಸ್ಥರ ಆಶಯವಾಗಿದೆ.

`ಹೂಲಿ ಗ್ರಾಮದಲ್ಲಿ ಅನೇಕ ಐತಿಹಾಸಿಕ ವಾಸ್ತುಶಿಲ್ಪವನ್ನು ದೇವಾಲಯಗಳು, ಸ್ಮಾರಕಗಳು, ವೀರಗಲ್ಲು, ಶಾಸನಗಳಿವೆ. ಹೀಗಾಗಿ ಇದಕ್ಕೆ ಕರ್ನಾಟಕದ ಶಿಲ್ಪಕಲೆಯ ರಾಜಧಾನಿ ಎಂದೂ ಕರೆಯುತ್ತಾರೆ. ಆದರೆ, ಎಲ್ಲರ ನಿರ್ಲಕ್ಷ್ಯದಿಂದಾಗಿ ಇವು ಅವನತಿಯ ಅಂಚಿಗೆ ತಲುಪುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದೆ ಹೂಲಿ ಗ್ರಾಮವು ಮುಂಬರುವ ದಿನಗಳಲ್ಲಿ ಒಂದು ದಂತಕಥೆಯಾಗಿ ಉಳಿಯುವದು ನಿಶ್ಚಿತ. ಹಾಗಾಗದಂತೆ ಸಂಬಂಧಪಟ್ಟ ಇಲಾಖೆಯವರು ಶೀಘ್ರವಾಗಿ ಎಚ್ಚೆತ್ತುಕೊಂಡು ಅವುಗಳನ್ನು ಸಂರಕ್ಷಿಸುವತ್ತ ಆಸಕ್ತಿ ತೋರಬೇಕು' ಎಂದು ಹೂಲಿಯ ಇತಿಹಾಸ ಸಂಶೋಧಕ ಶ್ರೀಧರ ಕುಲಕರ್ಣಿ `ಪ್ರಜಾವಾಣಿ'ಗೆ ತಿಳಿಸಿದರು.
source: Prajavani

Saturday, 4 February 2017

ಹೂಲಿ - News Article 3

ಐತಿಹಾಸಿಕ ದೇವಾಲಯಗಳ ಬೀಡು ಹೂಲಿ.

ಕಾಶಿಗಿದಂ ಮಿಗಿಲು ಕೇದಾರಕ್ಕಿಂತಧಿಕ ಶ್ರೀಶೈಲಕ್ಕಂ ಮೇಲು ಹಂಪಿಗಿದಂ ಪೆರ್ಚು ವೀರಶೈವಾಚಾರ ಸಂಪನ್ನರಿಂ ವಿಪುಳ ವೀರ ಮಾಹೇಶ್ವರ ಸಂದೋಹದಿಂ ಪರಮವೀರ ನಿಷ್ಠರಿಂ ದುಷ್ಟ ನಿಗ್ರಹ ಶಿಷ್ಟ ಪರಿಪಾಲರಿಂ ಮಾರರಿಪು ಪೌರಾಣ ಶಾಸ್ತ್ರ ಕಾವ್ಯಗಳಂ ಚಾರು ಸದ್ಭಕ್ತಿಯಿಂ ಕೇಳಿ ಉತ್ಸಾಹಗೈವ ವೀರಭಕ್ತ ಪ್ರತೀತಿಯಿಂ ದೊರೆತಪ್ಪುದಾ ಶಿವನಕೊರಳಮಾಲೆ ಪೂಮಾಲೆ ಹೂಲಿ ಗುರುರಾಜ ಚರಿತ್ರೆ

ಇತಿಹಾಸ ಮತ್ತು ಪುರಾಣ ಶಾಸ್ತ್ರಗಳಲ್ಲಿ ವರ್ಣಿತವಾದ ನೂರೊಂದು ದೇವಾಲಯ, ಬಾವಿಗಳನ್ನು ಹೊಂದಿದ ಗ್ರಾಮ ಹೂಲಿ. ಇದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಐತಿಹಾಸಿಕ ಸ್ಥಳ. ಇದನ್ನು ಬದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಲಚೂರಿ ರಾಜರು, ವಿಜಯನಗರದ ಅರಸರು, ಮರಾಠರು ಕಾಲಕಾಲಕ್ಕೆ ತಮ್ಮ ಆಡಳಿತಕ್ಕೆ ಬಳಸಿಕೊಂಡಿರುವುದನ್ನು ಇಲ್ಲಿ ಲಭ್ಯವಾದ ಶಾಸನಗಳು ತಿಳಿಸುತ್ತವೆ. ಪ್ರಮುಖ ಸಾಂಸ್ಕೃತಿಕ ನೆಲೆಯಾಗಿ, ಸಾವಿರ ಪಂಡಿತರಿಂದ ಶೋಭಿಸಿದ ಅಗ್ರಹಾರವಾಗಿದ್ದ ಹೂಲಿಯ ದೇವಾಲಯಗಳು ತಮ್ಮ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ನೋಡಿ ಎನ್ನುತ್ತ ಇಡೀ ಗ್ರಾಮದೆಲ್ಲೆಡೆ ವ್ಯಾಪಿಸಿವೆ.
ಹೂಲಿ ಗ್ರಾಮ ಸವದತ್ತಿಯಿಂದ ಪೂರ್ವಕ್ಕೆ ಸುಮಾರು ಒಂಬತ್ತು ಕಿ.ಮೀ ಅಂತರದಲ್ಲಿದ್ದು ಸವದತ್ತಿಯಿಂದ ರಾಮದುರ್ಗ, ಜಮಖಂಡಿ, ವಿಜಾಪುರಗಳಿಗೆ ಸಂಚರಿಸುವ ಎಲ್ಲ ಬಸ್‌ಗಳ ನಿಲುಗಡೆ ಹೊಂದಿದ್ದು. ಕೃತಯುಗದಲ್ಲಿ ಕಾರ್ತವೀರ್ಯಾರ್ಜುನನ ರಾಜಧಾನಿಯೆಂದೂ ಎಲ್ಲಮ್ಮದೇವಿ ಚರಿತ್ರೆಯಲ್ಲಿ ಉಲ್ಲೇಖಿತವಾದ ಹೂಲಿಯನ್ನು ಇಲ್ಲಿ ಲಭ್ಯವಾದ ಹಲವಾರು ಶಾಸನಗಳಲ್ಲಿ ಮಹಿಸ್ಪತಿ ನಗರ, ದಕ್ಷಿಣ ಕಾಶಿ, ಪೂವಲ್ಲಿ, ಪುಲಿಪುರ, ಪುಲಿಗ್ರಾಮ, ಚೂಡಾಮಣಿ ಪೂಲಿ, ಹೂಲಿ ಎಂದೆಲ್ಲ ಕರೆಯಲಾಗಿದೆ. ಎಲ್ಲಮ್ಮ ಚರಿತೆಯಲ್ಲಿ ಧರ್ಮವರ್ಧನ ಎಂಬ ರಾಜನು ಇಲ್ಲಿ ಆಳುತ್ತಿದ್ದನಂತೆ. ಜಮದಗ್ನಿಯು ರೇಣುಕಾದೇವಿಗೆ ಅಕ್ಕಿ ಕಾಳಿನ ತೂಕದ ಬಂಗಾರ ತರಲು ಈ ರಾಜನಲ್ಲಿಗೆ ಕಳಿಸುತ್ತಾನೆ ಎಂಬ ದೃಷ್ಟಾಂತವು, ಪರಶುರಾಮ ಮತ್ತು ಕಾರ್ತವೀರ್ಯಾರ್ಜುನರ ಹಲವು ಪ್ರಸಂಗಗಳು ಹೂಲಿ ಮತ್ತು ಸುತ್ತ ಮುತ್ತಲಿನ ಸ್ಥಳಗಳ ಕೆಲವು ಘಟನೆಗಳ ದೃಷ್ಟಾಂತಗಳಲ್ಲಿ ಉಲ್ಲೇಖಿತವಾಗುವ ಮೂಲಕ ಪುರಾಣ ಚರಿತ್ರೆಯಿಂದಲೂ ಪ್ರಸಿದ್ಧಿ ಹೊಂದಿದ ಗ್ರಾಮವಾಗಿ ಹೂಲಿ ಖ್ಯಾತಿಯಾಗಿತ್ತು,ಸರ್ವಧರ್ಮ ಸಮನ್ವಯತೆಯನ್ನು ಸಾಧಿಸಿದ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದ ವೀರಗಲ್ಲುಗಳು, ಮಹಾಸತಿಕಲ್ಲು, ಶಾಸನಗಳು, ವೈಷ್ಣವ, ಶೈವ, ಜೈನ ದೇವಾಲಯಗಳು ಮಠಗಳು ಇತಿಹಾಸದ ಮೇಲೆ ಬೆಳಕುಚೆಲ್ಲುವಂತ ದಾಖಲೆಗಳು ಇಲ್ಲಿ ಲಭ್ಯ.
ನೂರೊಂದು ದೇಗುಲಗಳಲ್ಲಿ ಬಹಳಷ್ಟು ದೇವಾಲಯಗಳು ಹಾಳಾಗಿದ್ದು ಅವುಗಳಿಗೆ ರಕ್ಷಣೆ ಇಲ್ಲದಾಗಿದ್ದು ಕೆಲವು ದೇವಾಲಯಗಳು ಮಾತ್ರ ತಮ್ಮ ಮೂಲ ವಾಸ್ತುಶಿಲ್ಪ ಕಲೆಯನ್ನು ಉಳಿಸಿಕೊಂಡಿವೆ. ಮದನೇಶ್ವರ ದೇವಾಲಯ, ಅಂಧಕೇಶ್ವರ ದೇವಾಲಯ, ತಾರಕೇಶ್ವರ. ಬನಶಂಕರಿ, ರಾಮೇಶ್ವರ, ನಾರಾಯಣ ದೇವಾಲಯ, ವೀರಭದ್ರ, ಕಲ್ಮೇಶ್ವರ, ಅಗಸ್ತೇಶ್ವರ, ಪಂಚಲಿಂಗೇಶ್ವರ ದೇವಾಲಯಗಳು ಹಾಗೂ ಪುರಾತನ ಬಾವಿಗಳು ಇಲ್ಲಿನ ಪ್ರಮುಖ ಆಕರ್ಷಣೆ.
ಇಲ್ಲಿನ ಅಂಧಕೇಶ್ವರ ದೇವಾಲಯದ ಅಂತರಾಳದಲ್ಲಿ ಮಕರತೋರಣವಿದ್ದು ಇದರಲ್ಲಿ ಶಿವನ ತಾಂಡವನೃತ್ಯ. ಚತುರ್ಮುಖ ಬ್ರಹ್ಮ. ವೈಕುಂಠ, ವಿಷ್ಣು ಇವರ ಉಬ್ಬು ಶಿಲ್ಪಗಳನ್ನು ಕಾಣಬಹುದು. ದ್ವಾರಬಂಧದ ಉದುಂಬರಕ್ಕೆ ಹೊಂದಿಕೊಂಡು ಚಂದ್ರಶಿಲಾ ರಚನೆ ಇರುವುದು.ಇಲ್ಲಿ ದ್ರಾವಿಡ ಮತ್ತು ಫಾಂಸನಾ ಶೈಲಿಯ ದೇವಾಲಯಗಳಿರುವುದು ವಿಶೇಷ. ದ್ರಾವಿಡ ಶೈಲಿಯ ದೇವಾಲಯಗಳ ಶಿಖರದಲ್ಲಿ ಮೇಲಕ್ಕೆ ಹೋದಂತೆ ಕ್ರಮೇಣ ಸಣ್ಣದಾಗುವ ಅಂತಸ್ತುಗಳಿದ್ದರೆ, ಈ ಅಂತಸ್ತು ಗರ್ಭಗೃಹದ ಪ್ರತಿರೂಪವಾಗಿರುವುದು.ಇದು ಪ್ರಧಾನವಾಗಿ ಆರು ಭಾಗಗಳನ್ನು ಹೊಂದಿದ್ದು ಅಧಿಷ್ಠಾ, ಭಿತ್ತಿ, ಪ್ರಸ್ತರ, ಗ್ರೀವ, ಶಿಖರ, ಸ್ತೂಪಿ ಹೀಗೆ ಆರು ಭಾಗಗಳನ್ನು ಹೊಂದಿ ಪ್ರತಿಯೊಂದು ಅಂತಸ್ತನ್ನು ವಿಭಾಗಿಸುವ ದುಂಡು ಕಪೋತಗಳು ಮತ್ತು ಮೇಲಂತಸ್ತುಗಳು ಸುತ್ತಲೂ ಇರುವ ಇಕ್ಕಟ್ಟಾದ ತೆರೆದ ಅಂಕಣಗಳನ್ನು ಹೊಂದಿವೆ.
ಗ್ರಾಮದ ಬಸ್ ನಿಲ್ದಾಣದಿಂದ ಇಳಿದು ಕಾಲ್ನಡಿಗೆಯಿಂದ ಬಂದರೆ ಸಿಗುವ ದೇಗುಲವೇ ಪಂಚಲಿಂಗೇಶ್ವರ ದೇವಾಲಯ. ಇದನ್ನು ಪುರಾತತ್ವ ಇಲಾಖೆಯವರು ಸಂರಕ್ಷಿಸಿದ್ದು ಇದೊಂದು ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು ಇನ್ನುಳಿದ ದೇವಾಲಯಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ. ಐದು ವಿಶಿಷ್ಟ ಗೋಪುರಗಳನ್ನು ಒಳಗೊಂಡ ಈ ದೇವಾಲಯವನ್ನು ಕ್ರಿ.ಶ.1044 ರಲ್ಲಿ ಲಚ್ಚಿಯಬ್ಬರಸಿಯು ಕಟ್ಟಿಸಿದ್ದು ಪೂರ್ವಾಭಿಮುಖವಾಗಿ ಮೂರು, ದಕ್ಷಿಣ ಮತ್ತು ಉತ್ತರಕ್ಕೆ ಮುಖಮಾಡಿದ ಒಂದೊಂದು ಗರ್ಭಗೃಹಗಳನ್ನು ಈ ದೇವಾಲಯ ಒಳಗೊಂಡಿದೆ.
ಹೂಲಿ ಆರಂಭದಲ್ಲಿ ಜೈನ ಪರಂಪರೆಯನ್ನು ಹೊಂದಿದ್ದು ಕಾಲಾನಂತರ ಇಲ್ಲಿ ಆಳಿದ ರಾಜಮಹಾರಾಜರು ಶೈವ, ವೈಷ್ಣವರಾಗಿರುವ ಕಾರಣ ಇಲ್ಲಿ ಸರ್ವಧರ್ಮಗಳ ನೆಲೆಯನ್ನು ಕಂಡಿತು..ರಾಘವಾಂಕ ಕಾವ್ಯದ ಲೇಖಕ ಚಿಕ್ಕ ನಂಜೇಶ ಈ ಗ್ರಾಮಕ್ಕೆ ಸೇರಿದವನು. ಈತ ಹೂಲಿಯನ್ನು ಪೂವಲ್ಲಿ ಎಂದು ಕರೆದಿರುವನು..ಇನ್ನು ಮದನೇಶ್ವರ ದೇವಾಲಯದಲ್ಲಿ ದೊರೆತ ದಾಖಲೆಗಳ ಪ್ರಕಾರ ಹೂಲಿ ದೇವಗುರು ಪರಂಪರೆ ಹೊಂದಿದ್ದು ಈ ಪರಂಪರೆಯಲ್ಲಿ ವ್ಯಾಕರಣ-ತರ್ಕಗಳಲ್ಲಿ ಸಾಕಷ್ಟು ವಿದ್ವತ್ತು ಸಾಧಿಸಿದ ವಿದ್ವಾಂಸರು ಋಷಿಮುನಿಗಳು ಇದ್ದರೆಂದು ತಿಳಿಯಬಹುದು. ಇಲ್ಲಿ 19 ಕ್ಕೂ ಹೆಚ್ಚು ಶಿಲಾಶಾಸನಗಳು ಮತ್ತು ತಾಮ್ರಪಟಗಳು ದೊರೆತಿದ್ದು ಇತಿಹಾಸದ ಮೇಲೆ ಬೆಳಕು ಚೆಲ್ಲಿವೆ.
ಪಂಚಲಿಂಗೇಶ್ವರ ದೇವಾಲಯವನ್ನು ವೀಕ್ಷಿಸಿ ಕೆರೆಯ ದಡದತ್ತ ಸಾಗಿದರೆ ಅಲ್ಲಿ ಹಲವಾರು ದೇವಾಲಯಗಳು ಕೈಬೀಸಿ ಕರೆಯುತ್ತವೆ.ದ್ರಾವಿಡ ಶೈಲಿಯ ಅಗಸ್ತೇಶ್ವರ ದೇವಾಲಯ, ಭೀಮೇಶ್ವರ ದೇವಾಲಯ, ಕರಿಸಿದ್ದೇಶ್ವರ ದೇವಾಲಯ ಹೀಗೆ ದೇವಾಲಯಗಳ ಸಮುಚ್ಚಯವೇ ಇದೆ. ಶಿಥಿಲಾವಸ್ಥೆಯಲ್ಲಿರುವ ಈ ಎಲ್ಲ ದೇಗುಲಗಳನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಐಹೊಳೆ, ಪಟ್ಟದಕಲ್ಲಿನಲ್ಲಿ ದೇವಾಲಯಗಳನ್ನು ಸಂರಕ್ಷಿಸಿದ ಹಾಗೆ ಇವುಗಳನ್ನು ಸಂರಕ್ಷಿಸಿದ್ದರೆ ಇದು ಮತ್ತೊಂದು ದೇವಾಲಯಗಳ ತೊಟ್ಟಿಲು ಆಗಲು ಸಾಧ್ಯವಿತ್ತು ಅನ್ನಿಸದೇ ಇರದು. ಬೆಟ್ಟದಲ್ಲಿ ಕೋಟೆಯೊಂದು ಕಾಣುತ್ತದೆ ಇದು ಕೂಡ ಹಾಳಾಗಿದ್ದು ಇದು ಶಿವಾಜಿಯ ಕಾಲದ್ದು ಎಂದು ಹೇಳುವರು.
ಇನ್ನು ಮಠಮಾನ್ಯಗಳು ಕೂಡ ಇಂದಿಗೂ ಇಲ್ಲಿನ ಜನಮಾನಸದಲ್ಲಿ ಭಕ್ತಿಪರಂಪರೆ ಹುಟ್ಟುಹಾಕಿದ್ದು ಪುರಾತನ ಚರಿತ್ರೆಯುಳ್ಳ ಸಂಬಯ್ಯನ ಮಠ(ಹೂಲಿ ಅಜ್ಜನ ಮಠ), ಶೀಲವಂತರ(ರಂಭಾಪುರಿ) ಮಠ, ಹಿರೇಮಠ, ಪ್ರಮುಖವಾಗಿದ್ದು ನಿರ್ಮಲ ಮತ್ತು ಮಾಣಿಕ್ಯ ತೀರ್ಥ ಎಂಬ ಕೆರೆಗಳು, ವಾರಕರಿ ಪಂಥದವರು ಕಟ್ಟಿಸಿದ ಹರಿಮಂದಿರ ಹೂಲಿ ಮತ್ತೊಂದು ಆಕರ್ಷಣೆಯ ಭಕ್ತಿಯ ಸಂಕೇತಗಳು. ಹೂಲಿಯನ್ನು ನೋಡಬೇಕೆಂದರೆ ಇಡೀ ಒಂದು ದಿನ ಬೇಕು. ಕಾಲ್ನಡಿಗೆಯ ಮೂಲಕ ಊರು ಹಾಗೂ ಬೆಟ್ಟದಲ್ಲಿರುವ ದೇವಾಲಯಗಳು ಅಲ್ಲಲ್ಲಿ ಹರಿದಿರುವ ಕೆರೆಗಳು. ತಮ್ಮ ಇತಿಹಾಸ ಸಾರುತ್ತಿರುವ ಬಾವಿಗಳು. ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡ ಮೂಲಕ ಸವದತ್ತಿಗೆ ಸಾಕಷ್ಟು ಸಾರಿಗೆ ವ್ಯವಸ್ಥೆಯ ಅನುಕೂಲವಿದ್ದು ಉಳಿದುಕೊಳ್ಳಲು ಸವದತ್ತಿಯಲ್ಲಿ ಸಾಕಷ್ಟು ವಸತಿಗೃಹಗಳ ಅನುಕೂಲ ಕೂಡ ಇರುವುದು. ಸವದತ್ತಿಯಿಂದ ಹತ್ತಿರದಲ್ಲಿರುವ ಹೂಲಿಗೆ ಒಂದೆರಡು ದಿನದ ಮಟ್ಟಿಗೆ ಭೇಟಿ ನೀಡಿದರೆ ಇಲ್ಲಿನ ಶಿಲ್ಪಕಲೆಯ ವೈಭವವನ್ನು ಕಣ್ತುಂಬಿಕೊಳ್ಳಬಹುದು.
source: ಹೊಸದಿಗಂತ 

Hooli - News Article 2

The Temple Village Of Hooli In Karnataka

Hooli is one of the lesser known heritage sites in Karnataka. 

Written by: Akshatha Vinayak 

When it comes to conservation, not just the heritage structures but the whole locality has to be restored. The importance has to be given to the whole region which has existed along with heritages. There are many historical places in India which are unknown and are getting silently vanished over a period of time. One such village is Hooli in Karnataka that holds some beautiful archaeological sites. Hooli is an ancient village, which was once ruled by Rattas of Saundatti and Patwardhans of Ramdurga. The temples belonging to those era are the ones seen in the village now.

Where Is Hooli?

Hooli is a small village located in Belgaum District which is around 12 km from Saudatti or Saundatti. This historical village is about 60 km from the city of Hubli in Karnataka. 

Significance Of The Name Hooli 

According to historical records and folklore, the place was called as Poovalli. The name Hooli is said to be derived from of Poovalli. However, the name Hooli has been in use from a very long time. Ruined Temples 

Temples Of Hooli

Hooli is dotted with several temples with most of them having Chalukhya style of architecture. Among them, the Panchalingeshwara Temple is the famous temple of Hooli. Apart from this shrine, Hooli Sangameshwara Ajjanavaru Temple, Kashi Vishwanatha Temple, Madaneshwara Temple, Andhakeshwara Temple, Suryanarayana Temple, Kalmeshwara Temple, Tarkeshwara Temple and Bhavanishankara Temple are some of the other temples located at Hooli. Places To Visit In Belgaum Hooli Panchalingeshwara Temple Hooli Panchalingeshwara Temple is one of the main temples that is in a good condition. This temple is dedicated to Lord Shiva and it exihibits Chalukhya style of architecture. Today, it is one of the monuments, which is preserved by the Archaeological Survey of India. Threats Unfortunately, most temples of Hooli are not in good condition and they have to restored. The Government has proposed a plan to develop tourism in this village. The whole locality has to be restored without affecting the families living in this village. The place is under threat because of the lack of maintainance. There has to be combined efforts of locals and Government to restore this place. Another Temple 

Best Time To Visit Hooli

October to February is the best time to visit Hooli as the climate is cool and pleasant during the months. The summers are really hot and not suitable for travel. Monsoon is also one of the good seasons to explore this village. 

Tourist Places Near Hooli

Saundatti Yellamma Temple, Gokak Falls, Belgaum Fort, Shri Hari Mandir, Vajrapoha Falls, Kittur Fort, etc., are some of the top tourist places near Hooli. Hooli is one of the monumental sites in Karnataka, more efforts have to be made to protect these structures from vanishing. No doubt, it is one of the beautiful offbeat destinations in Karnataka that must be explored

Hooli - News Article 1

Hooli has so many temples; every temple has its own well. Even at remotest location on the hills has couple of temples.
Hooli is about 9 kms from Saundatti.
One of the oldest village in the Belgaum District, it is famous for Panchaligeswara temple. Some of the other ruined temples waiting for conservation and restoration. On the outskirts of Hooli is the Trikuteshwara Temple.
Various temples at Hooli:
Hooli Panchalingeshwara temple:Architecture of the Hooli Panchalingeshwar Temple is to be adored. It is a protected monument comes under Archeological Survey of India. Earlier people during summer afternoon they used to resting in the shade of this temple. Because the temple is made of stone, it is unbelievably cool even in the scorching summer.
Other than Panchalingeshwara Temple, Hooli has many other old temples; most of them are now in ruins due to negligence. One is amazed by the sculptures and carvings on stone. Most of the temples have their floor dug up for the hunt for treasure.
Other temples at Hooli are Andhakeshwara Temple, Bhavnisankara Temple, Kalmeshwara Temple, Kashi Vishwanatha Temple, Madaneshwara Temple, Suryanarayan Temple, Tarkeshwara Temple, Hooli sangameshwar ajjanavaru, Beerdevar temple Hooli.
Shivakashi Valley seems to be a place which was once densely covered by trees. At this location you can find the marks left by monsoon springs and waterfalls. Based on stories heard from village elders there used to be tigers once upon a time. Stories were told where some village folks hunted them off decades ago. The location otherwise is dotted with few temples and well. Tigers may have disappeared, but you will still be lucky to find monkeys eating the figs from few remaining trees.
source: Allaboutbelgaum.com

WIKIPEDIA

WIKIPEDIA


Hooli is in Belgaum District in Karnataka India. It is about 9 km from Saundatti. One of the oldest villages in the Belgaum District, Hooli is the site of the Panchaligeswara temple and the Trikuteshwara Temple. The village is historically rich, boasting of a ruined fort atop a hill and numerous temples. Hooli has been under the rule of the Rattas of SaundattiPatwardhans of Ramdurg and most of the temples feature Chalukya architecture and were initially Jain Bastis indicating a Chalukya rule. The name of the village is a corrupted form of PooValli meaning a flowery ear ornament. The village was also called MahishpatiNagar in ancient times.


Panchalingeshwara temple Hooli


Opposite the Panchalingeshwara temple is the relatively modern Hari Mandir. The Sant Culture or Nath tradition influenced heavily by Jnaneshwar flourished hereThe nice architecture of Hooli Panchalingeshwar Temple is to be adored. It is a protected monument that comes under Archaeological Survey of India. Earlier, during summer afternoons people used to rest in the shade of this temple. Because the temple was made of stone, it was unbelievably cool even in the scorching summer.

Conservation and restoration Ruined temples at Hooli

Other temples at Hooli are Other than Panchalingeshwara Temple, Hooli has many other old temples; most of them are now in ruins due to negligence. One can be amazed by the sculptures and carvings on the stone. Most of the temples have their floor dug up for treasure hunts, so much is lost and stolen.
  • Andhakeshwara Temple
  • Bhavnisankara Temple
  • Kalmeshwara Temple
  • Kashi Vishwanatha Temple
  • Madaneshwara Temple
  • Suryanarayan Temple
  • Tarkeshwara Temple
  • Hooli Sangameshwar Ajjanavaru Temple: its great god of Hooli
  • Beerdevar temple Hooli
  • These temples are in need of conservation and restoration.

    Tourism Plans (Unconfirmed as of December 2013)

    There probably are plans or proposals to convert the Panchlingeshwar Temple site to a tourist destination. To achieve this objective, the concerned central/state department has performed survey and has been in discussion with the local people. This development may involve the demolition of local houses within the perimeter of some 100–200 meters. In case this happens, it would be a great shame, as this very structures, most of them mud houses surrounding the temple are also a part of the village history and carry invaluable importance to the local architecture settings. In India, the lessons needs to be derived from observing how some of the world heritage sites around the world, is being preserved and more importantly recreated as its original state.
    An ideal solution to preserve the architecture and as well encourage tourism is to develop a tourism infrastructure outside the village and then facilitate organized tours to the temple. Hotels, restaurants, shops, parking places etc. should not be allowed to flourish anywhere within the existing village or nearby the temple site and instead be located outside the village. If required, evacuate the population in affected perimeter, but preserve each and every structures as they are and convert them to museums. The village Hooli is still alive with activity and its surroundings has lot of history and architecture to share with tourists and fill few museums around the site.
    Any development in the vicinity of the site is going to be disastrous, difficult to maintain, and lose the charm of the very architecture piece, that is being showcased. Not to say that the impacted villagers will not only lose their ancestral home, but instead become detached from the village itself, where, their ancestors once upon a time created and served this archaeological masterpiece. Rather, the old mud houses should be maintained as they are and there owners / residents should be made partners in their conservation. For someone, who has experienced and lived in the village 30 or 40 years back, which once had streets paved with cobbled stones, the ruins of temple around the village which had number of precious architecture pieces, is now all but stolen or destroyed. Further degradation is not necessary in name of the preservation and encouraging tourism.

    Shivakashi Stream

    Shivakashi Valley seems to be a place which was once densely covered by trees. At this location you can find the marks left by monsoon springs and water falls. Based on stories from village elders there were tigers once upon a time. Village folks hunted them off decades ago.
    The location otherwise is dotted with many temples and wells. There is a Dhyan Mandir used by Krishnaraj Swamiji as the legend has it. The view from the top of the hill is picturesque. The water cascades down at various levels and flows to join the lake in front of KereSiddeshwara Temple.

    Hooli Surname

    Ancestors born & brought up at this place migrated to nearby villages over a long period of time, they were referred to as people from "Hooli", hence many families have their surnames as "Hooli".
    However, the most common surnames in the village itself are Kulkarni, Patil, Chikkareddi. These families have been living in the same area for hundreds of years now and every family is invariably interrelated