Tuesday, 24 October 2023

ಹೂಲಿಯ ಪಂಚವಣ್ಣಿಗೆ ಮಠವು ("ಶಿವಾನುಭವ" ಪತ್ರಿಕೆಯಲ್ಲಿ ಶ್ರೀ ಮಧುರಚೆನ್ನರು ೧೯೨೭ನೇ ಇಸ್ವಿಯಲ್ಲಿ ಪ್ರಕಟಿಸಿದ ಬರಹ)

 ʼಮಧುರಚೆನ್ನʼ ಎಂದೇ ಖ್ಯಾತರಾಗಿದ್ದ ಶ್ರೀ ಚೆನ್ನಮಲ್ಲಪ್ಪ ಗಲಗಲಿ ಅವರು ನಾಡು ಕಂಡ ಪ್ರಮುಖ ಸಾಹಿತಿ. ಇತಿಹಾಸಕಾರ, ಆಧ್ಯಾತ್ಮಜೀವಿ.


ಅವರು ಹೂಲಿಯನ್ನು ಸಂದರ್ಶಿಸಿ, ಅಲ್ಲಿಯ ಪಂಚವಣ್ಣಿಗೆ ಮಠದ ಬಗ್ಗೆ ಬರೆದ ದೀರ್ಘ ಲೇಖನವು "ಶಿವಾನುಭವ" ಸಂಚಿಕೆಯ ೧೯೨೭ನೇ ಇಸ್ವಿಯ ಸಪ್ಟಂಬರ್‌ ಸಂಚಿಕೆಯಲ್ಲಿ ಪ್ರಕಟವಾಗಿತ್ತು.


ದೊಡ್ಡದೂ, ವಿದ್ವತ್‌ಪೂರ್ಣವೂ ಆದ ಈ ಬರಹದ ಪ್ರತಿ ನಿಮಗಾಗಿ - ಇಂಟರ್‌ನೆಟ್‌ ಆರ್ಕೈವ್‌ ನಿಂದ.. 





























Sunday, 22 October 2023

ಡಾ. ಜೇಮ್ಸ್ ಬರ್ಜಸ್‌ ಕಂಡ ಹೂಲಿ

 

ಡಾ. ಜೇಮ್ಸ್ ಬರ್ಜಸ್‌ ಭಾರತೀಯ ಪುರಾತತ್ವ ಶಾಸ್ತ್ರದ ಅಧ್ವರ್ಯುಗಳಲ್ಲಿ ಒಬ್ಬರು. ‌

 

೧೮೩೨ರಲ್ಲಿ ಇಂಗ್ಲಂಡಿನಲ್ಲಿ ಜನಿಸಿದ್ದ ಡಾ. ಬರ್ಜಸ್‌, ಭಾರತಕ್ಕೆ ಬಂದು ಶಿಕ್ಷಣ ಇಲಾಖೆಯಲ್ಲಿ ಮೊದಲು ಕಲಕತ್ತೆಯಲ್ಲಿ, ನಂತರ ಮುಂಬೈಯಲ್ಲಿ ಕೆಲಸಮಾಡತೊಡಗಿದ್ದರು. ಆದರೆ ಈ ದೇಶದ ಅಗಾಧ ಪ್ರಾಚ್ಯ ಸಿರಿಯನ್ನು ನೋಡಿ, ಅವರಿಗೆ ಇತಿಹಾಸ-ಪ್ರಾಚ್ಯಶಾಸ್ತ್ರದಲ್ಲಿ ಆಸಕ್ತಿ ಹುಟ್ಟಿತು. ೧೮೭೨ರಲ್ಲಿ ಅವರು “ದಿ ಇಂಡಿಯನ್‌ ಆಂಟಿಕ್ವರಿ” ಎಂಬ ಖ್ಯಾತ ಪತ್ರಿಕೆಯನ್ನು ಸ್ಥಾಪಿಸಿದರು. ಹದಿಮೂರು ವರ್ಷಗಳ ಕಾಲ ಅದನ್ನು ನಡೆಸಿ, ಅದಕ್ಕೊಂದು ಭದ್ರ ಬುನಾದಿ ಹಾಕಿ ಕೊಟ್ಟರು. ಆ ಪತ್ರಿಕೆಯನ್ನು ಮುಂದೆ ಡಾ.ಫ್ಲೀಟ್‌, ಸರ್.‌ ರಿಚರ್ಡ್‌ ಟೆಂಪಲ್‌ ಮುಂತಾದ ಪ್ರಬೃತಿಗಳು ನಡೆಸಿ ಅದಕ್ಕೆ ದೊಡ್ಡ ಹೆಸರು ತಂದು ಕೊಟ್ಟರು.

೧೮೭೩ರಲ್ಲಿ ಸರಕಾರ ಡಾ. ಬರ್ಜಸ್‌ ಅವರ ಆಸಕ್ತಿ-ಅಧ್ಯಯನ ಗಮನಿಸಿ ಅವರನ್ನು ಆರ್ಕಿಯಾಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ಪಶ್ಚಿಮ ಭಾರತದ ಮುಖ್ಯಸ್ಥರನ್ನಾಗಿ ನೇಮಿಸಿತು. ವೃತ್ತಿ-ಪ್ರವೃತ್ತಿ ಒಂದೇಯಾದ ನಂತರ ಡಾ. ಬರ್ಜಸ್‌ ಆಸಕ್ತಿಯಿಂದ ಕೆಲಸ ಶುರುಮಾಡಿದರು, ಮೊಟ್ಟಮೊದಲಿಗೆ ಬಾಂಬೆ ಕರ್ನಾಟಕದ ಜಿಲ್ಲೆಗಳ ಪ್ರಾಚ್ಯ ಸರ್ವೇಕ್ಷಣ ಶುರುಮಾಡಿದರು – ಜನೇವರಿ ೧೫- ಮೇ ೧೮೭೪ರ ವರೆಗೆ ನಡೆದ ಸರ್ವೆಯ ವರದಿಯು ಜಾಲತಾಣದಲ್ಲಿ ಲಭ್ಯವಿದೆ - Report Of The First Seasons Operations In The Belgam and Kaladgi Districts January To May 1874.

ಸಂಪಗಾವ್-ಬೈಲಹೊಂಗಲ-ಸವದತ್ತಿ-ಯಲ್ಲಮ್ಮನಗುಡ್ಡಗಳ ಸರ್ವೇಕ್ಷಣ ಮಾಡಿ ೧೮೭೪, ಫೆಬ್ರುವರಿ ೨೭ರಂದು ಹೂಲಿಗೆ ಬಂದ ಡಾ. ಬರ್ಜಸ್‌, ಇಲ್ಲಿಯ ಗುಡಿಗಳ ಅಭ್ಯಾಸ ಮಾಡಿ, ಫೋಟೋ ತೆಗೆದುಕೊಂಡರು. ಅವರು ಪ್ರಕಟಿಸಿದ ವರದಿಯಲ್ಲಿರುವ ಹೂಲಿಯ ಪಂಚಲಿಂಗಪ್ಪನ ಗುಡಿಯ ಚಿತ್ರ 



ಮತ್ತು ನಕಾಶೆ:






ಡಾ. ಬರ್ಜಸ್‌ ಅವರು ತೆಗೆದ ಹೂಲಿಯ ಗುಡಿಗಳ ಚಿತ್ರಗಳನ್ನು ಬ್ರಿಟೀಷ್‌ ಲೈಬ್ರರಿಯವರು ಜಾಲತಾಣದಲ್ಲಿ ಒದಗಿಸಿದ್ದಾರೆ - ಲಿಂಕ್.‌ ನೂರೈವತ್ತು ವರ್ಷಗಳ ಹಳೆಯ ಹೂಲಿಯ ಆ ಫೋಟೋಗಳು ನಿಮ್ಮ ಅವಗಾಹನೆಗಾಗಿ:

 

ಪಂಚಲಿಂಗಪ್ಪನ ಗುಡಿಯ ಪೂರ್ವದ ನೋಟ ಮತ್ತು ಉತ್ತರದ ನೋಟ:




(ವರದಿಯಲ್ಲಿ ಇದೇ ಚಿತ್ರದ ʼಬ್ಲಾಕ್‌ʼ ಅನ್ನು ಮುದ್ರಿಸಲಾಗಿದೆ)



ಕೆರೆದಂಡೆಯ ಅಂಧಕೇಶ್ವರ ಗುಡಿ(?),  ಹಿಂದೆ ಕಾಣಿಸತಾ ಇರೋದು ಮನಿಸಿದ್ದಪ್ಪನ ಗುಡ್ಡ (?)



ಕೆರೆದಂಡೆಯ ಭೀಮೇಶ್ವರ ಗುಡಿ(?)




ಗುಡ್ಡದಲ್ಲಿರುವ ತಾರಕೇಶ್ವರ ಗುಡಿ:




(ಡಾ. ಬರ್ಜಸ್‌ರವರು ಉತ್ತರೋತ್ತರವಾಗಿ ಆರ್ಕಿಲಾಗಿಕಲ್‌ ಸರ್ವೆ ಆಫ್‌ ಇಂಡಿಯಾದ ಡೈರೆಕ್ಟರ್‌ ಜನರಲ್‌ ಆಗಿ, ಎಪಿಗಾಫ್ರಿಯಾ ಇಂಡಿಕಾ ಸಂಪುಟಗಳ ಸರಣಿ ಶುರುಮಾಡಿ, ಅದಲ್ಲದೇ ಸ್ವತಃ ಹಲವಾರು ಸಂಶೋಧನೆ ಮಾಡಿ, ಹಲವು ಪುಸ್ತಕಗಳನ್ನು ಪ್ರಕಟಿಸಿ ಭಾರತೀಯ ಪುರಾತತ್ವಶಾಸ್ತ್ರಕ್ಕೆ ಉಪಕಾರಮಾಡಿದ್ದಾರೆ)

Monday, 16 October 2023

(ಇತಿಹಾಸ ದರ್ಶನ ದಿಂದ) ಹೂಲಿ : ಒಂದು ಜೈನಕೇಂದ್ರ

 (ಶ್ರೀ ಕೆ.ಸಿ.ಪಾಟೀಲರು ೨೦೦೯ರಲ್ಲಿ 'ಇತಿಹಾಸ ದರ್ಶನ' ಪತ್ರಿಕೆಯ ಸಂಪುಟ ೨೪ ರಲ್ಲಿ ಪ್ರಕಟಿಸಿದ ಬರಹ)




Sunday, 15 October 2023

ಶ್ರೀ ವೆಂಕಟ ರಂಗೋ ಕಟ್ಟಿ ಯವರು ವರ್ಣಿಸಿದ ಹೂಲಿ

 (೧೮೯೩ರ ಗ್ಯಾಸೆಟಿಯರ್‌ನಲ್ಲಿ ಶ್ರೀ ವೆಂಕಟ ರಂಗೋ ಕಟ್ಟಿ ಯವರು ವರ್ಣಿಸಿದ ಹೂಲಿ)


(ಇತಿಹಾಸ ದರ್ಶನ ದಿಂದ) ಹೂಲಿ : ಕಾಳಾಮುಖ ಮಹಾಅಗ್ರಹಾರ

(ಇತಿಹಾಸ ದರ್ಶನ ಪತ್ರಿಕೆಯ ಸಂಪುಟ ೨೯ರಲ್ಲಿ ಪ್ರಕಟವಾಗಿದ್ದ  ಶ್ರೀ ಕೆ.ಎಸ್.ಪಾಟೀಲ್ ಅವರ ಬರಹ)










( ಮೂಲ https://archive.org/details/kia.itihasadarshanav0000drde/page/n251/mode/1up?q=%E0%B2%B9%E0%B3%82%E0%B2%B2%E0%B2%BF )





















Saturday, 14 October 2023

ಹೂಲಿಯ ಅತಿ ಹಳೆಯ ಲಿಖಿತ ದಾಖಲೆ:

 ಹೂಲಿಯಲ್ಲಿ ೧೯೬೯ನೇ ಇಸ್ವಿಯಲ್ಲಿ ದೊರೆತ ಚಾಲುಕ್ಯರ ಮಂಗಳೇಶನ ತಾಮ್ರಶಾಸನವೇ ಹೂಲಿಗೆ ಸಂಬಂಧಿಸಿದ ಹಳೆಯ ಲಿಖಿತ ದಾಖಲೆ. ಹೂಲಿಯಲ್ಲಿರುವ ಎಲ್ಲ ಕಲ್ಬರಹಗಳು ಹತ್ತನೆ ಶತಮಾನ ಅಥವಾ ನಂತರದವು. ಈ ತಾಮ್ರಶಾಸನ ಸುಮಾರು ಕ್ರಿ.ಶ ೬೦೦ನೇ ಇಸ್ವಿಯದು.. ಅಂದರೆ ಉಳಿದ ಬರಹಗಳಿಗಿಂತ ಮೂರು-ನಾಲ್ಕು ಶತಮಾನ ಹಳೆಯದು.


ಸಧ್ಯ ಈ ತಾಮ್ರಶಾಸನ ಧಾರವಾಡ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯಲ್ಲಿವೆ ( ನಾನು ವಿಚಾರಿಸಿದಾಗ ಸಂಸ್ಥೆಯ ಮುಖ್ಯಸ್ಥರು ಅಲ್ಲಿಲ್ಲ ಎಂದಿದ್ದರು, ಇನ್ನೊಮ್ಮೆ ವಿಚಾರಿಸಬೇಕು- ಗುರು).


ಶಾಸನದಲ್ಲಿ ಚಾಲುಕ್ಯರ ಮಂಗಳೇಶನ (ಶಾಸನ 'ಚಾಲಿಕ್ಯ' ವಂಶದ 'ಮಂಗಳರಾಜ' ಎಂದಿದೆ) ಆಳ್ವಿಕೆಯಲ್ಲಿ, ಅವನ ಸಾಮಂತನಾಗಿದ್ದ ಸೇಂದ್ರಕ ವಂಶದ ರವಿಶಕ್ತಿಯು ಕಿರುವಟ್ಟಗೆರೆಯ ೫೦ ನಿವರ್ತನ ಭೂಮಿಯನ್ನು ಶಾಂತಿನಾಥ ಬಸದಿಗಾಗಿ ದಾನ ಮಾಡಿದ್ದನ್ನು ದಾಖಲಿಸಲಾಗಿದೆ. ದಾನವನ್ನು ಪರಲೂರು ಸಂಘದ ಜೈನಗುರುಗಳಾದ ಶ್ರೀ ನಂದಿಯ ಶಿಷ್ಯ ಅಭಯನಂದಿ ಸ್ವೀಕರಿಸಿದ್ದನು.



ಶಾಸನದಲ್ಲಿ ಉಲ್ಲೇಖಿಸಿದ 'ಕಿರುವಟ್ಟಗೆರೆ'ಯು ಇಂದಿನ ಹೂಲಿಯ ಭಾಗವಾಗಿದೆ, ಪರಲೂರು ಎಂಬುದು ಇಂದಿನ ಬಾಗಲಕೋಟ ಜಿಲ್ಲೆಯ ಹಳ್ಳೂರು ಆಗಿದೆ.



ಶಾಸನವನ್ನು ಮೂರು ತಾಮ್ರದ ಹಾಳೆಗಳಲ್ಲಿ ಬರೆಯಲಾಗಿದೆ - ಮೊದಲ ಮತ್ತು ಮೂರನೆ ಹಾಳೆಗಳಲ್ಲಿ ಒಂದೇ ಬದಿಯಲ್ಲಿ , ಎರಡನೆ ಹಾಳೆಯ ಎರಡೂ ಬದಿಯಲ್ಲಿ ಬರೆಯಲಾಗಿದೆ. ಹಾಳೆಗಳನ್ನು ಒಂದು ಉಂಗುರಿನಲ್ಲಿ ಹಾಕಿ, ಸೇಂದ್ರಕರ ಮರಿಯೊಂದಿಗಿರುವ ಹುಲಿ ('ಸ-ವತ್ಸ ವ್ಯಾಘ್ರ') ಲಾಂಛನದಿಂದ ಮುಚ್ಚಲಾಗಿದೆ. ಶಾಸನವು ಸಂಸ್ಕೃತ ನುಡಿ, ಕನ್ನಡ ಲಿಪಿಯಲ್ಲಿದೆ.





ಚಿತ್ರ ಕೃಪೆ ಮತ್ತು ಹೆಚ್ಚಿನ ಮಾಹಿತಿಗೆ ಎಪಿಗ್ರಾಫಿಯಾ ಇಂಡಿಕಾ -ಸಂಪುಟ ೩೮, ಶಾಸನ ಸಂ: ೪೯/ಪುಟ ೨೮೬) -https://archive.org/details/in.ernet.dli.2015.532805/page/n423/mode/1up?q=%22Huli+Plates+of+Mangalaraja%22.